Lakhpati Didi Yojana: ಯಾವುದೇ ಬಡ್ಡಿ ಇಲ್ಲದೆ ಮಹಿಳೆಯರಿಗೆ 20 ಲಕ್ಷದವರೆಗೆ ಸಾಲ ಸಿಗಲಿದೆ.! ಈ ಯೋಜನೆಗೆ ಹೀಗೆ ಅಪ್ಲೈ ಮಾಡಿ!

|
Facebook

Lakhpati Didi Yojana:ಯಾವುದೇ ಬಡ್ಡಿ ಇಲ್ಲದೆ ಮಹಿಳೆಯರಿಗೆ 20 ಲಕ್ಷದವರೆಗೆ ಸಾಲ ಸಿಗಲಿದೆ.! ಈ ಯೋಜನೆಗೆ ಹೀಗೆ ಅಪ್ಲೈ ಮಾಡಿ!

Lakhpati Didi Yojana 2024: ನಮಸ್ಕಾರ ಎಲ್ಲ ಕರ್ನಾಟಕದ ಜನತೆಗೆ, ನಗರ ಪ್ರದೇಶದಲ್ಲಿ ಅಥವಾ ಗ್ರಾಮೀಣ ಪ್ರದೇಶದಲ್ಲಿ ವಾಸವಾಗಿರುವ ಮಹಿಳೆಯರು ತಮ್ಮ ಸ್ವಂತ ವ್ಯಾಪಾರ ಪ್ರಾರಂಭಿಸಲು ಮತ್ತು ಈಗಾಗಲೇ ವ್ಯಾಪಾರ ಪ್ರಾರಂಭಿಸಿದ ಮಹಿಳೆಯರಿಗೆ, ಸಹಾಯವಾಗಲು ಕೇಂದ್ರ ಸರ್ಕಾರ ಈ ಒಂದು ಲಖ್ಪತಿ ದೀದಿ ಯೋಜನೆಯನ್ನು ಜಾರಿಗೆ ತಂದಿದೆ. ಈ ಒಂದು ಯೋಜನೆ ಅಡಿಯಲ್ಲಿ ಮಹಿಳೆಯರು ಯಾವುದೇ ಬಡ್ಡಿದರ ಇಲ್ಲದೆ 20 ಲಕ್ಷದವರೆಗೆ ಬ್ಯಾಂಕಿನ ಮೂಲಕ ಸಾಲವನ್ನು ಪಡೆಯಬಹುದು.

WhatsApp Group Join Now
Telegram Group Join Now

ಹೌದು ಈ ಒಂದು ಯೋಜನೆ ಸ್ವ-ಸಹಾಯ ಸಂಘದ ಮಹಿಳೆಯರಿಗೆ ಮಾತ್ರವಾಗಿದೆ, ಯಾವೆಲ್ಲ ಮಹಿಳೆಯರು ಈ ಒಂದು ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದು? ಮತ್ತು ಯಾವ ರೀತಿಯಾಗಿ ಅರ್ಜಿಯನ್ನು ಸಲ್ಲಿಸಬೇಕು? ಅರ್ಜಿಯನ್ನು ಸಲ್ಲಿಸಲು ಬೇಕಾಗುವ ದಾಖಲೆಗಳು? ಮತ್ತು ಇನ್ನೂ ಹೆಚ್ಚಿನ ಮಾಹಿತಿ ಕೆಳಗಡೆ ನೀಡಲಾಗಿದೆ.

ಲಖ್ಪದಿ ದೀದಿ ಯೋಜನೆಯು ಮಹಿಳೆಯರಿಗಾಗಿ ಕೇಂದ್ರ ಸರ್ಕಾರವು ಜಾರಿಗೆ ತಂದಿರೋ ಯೋಜನೆ ಆಗಿದೆ, ಈ ಒಂದು ಯೋಜನೆ ಅಡಿಯಲ್ಲಿ ಮಹಿಳೆಯರು ಸ್ವಂತ ಉದ್ಯೋಗ ಅಥವಾ ತಮ್ಮ ಬಡತನ ರೇಖೆಯಿಂದ ಹೊರಬಂದು ಸ್ವಂತ ಉದ್ಯಮ ಪ್ರಾರಂಭಿಸುವ ಸಲುವಾಗಿ ಈ ಒಂದು ಯೋಜನೆಯಲ್ಲಿ 20 ಲಕ್ಷಕ್ಕೂ ಹೆಚ್ಚು ಸಾಲವನ್ನು ಯಾವುದೇ ಬಡ್ಡಿ ದರವಿಲ್ಲದೆ ನೀಡಲಾಗುತ್ತದೆ.

ಈ ಯೋಜನೆಯ ಅರ್ಹತೆಗಳು:

  • ಈ ಒಂದು ಯೋಜನೆ ಸದುಪಯೋಗ ಪಡೆದುಕೊಳ್ಳಲು ಸ್ವಸಹಾಯ ಸಂಘದ ಸದಸ್ಯರು ಆಗಿರಬೇಕು.
  • ಮಹಿಳೆಯರು ಮಾತ್ರ ಈ ಒಂದು ಯೋಜನೆ ಸದುಪಯೋಗ ಪಡೆದುಕೊಳ್ಳಬಹುದು.
  • ಮಹಿಳೆಯರ ವಯಸ್ಸು ಕನಿಷ್ಠ 18 ವರ್ಷ ಗರಿಷ್ಠ 50 ವರ್ಷವನ್ನು ಮೀರಬಾರದು.
  • ಅರ್ಜಿ ಸಲ್ಲಿಸುವ ಮಹಿಳೆಯರ ಕುಟುಂಬದಲ್ಲಿ ಯಾವುದೇ ಸರಕಾರಿ ನೌಕರರು ಇರಬಾರದು.

ಈ ಯೋಜನೆಯಲ್ಲಿ ಸಿಗುವ ಸಾಲ ಸೌಲಭ್ಯ:

ಈ ಒಂದು ಯೋಜನೆ ಮುಖಾಂತರ ನೀವು ಎರಡು ರೀತಿಯಾಗಿ ಸಾಲವನ್ನು ಪಡೆಯಬಹುದು, ಒಂದು ಬ್ಯಾಂಕ್ ಮುಖಾಂತರ ಸಾಲ ಪಡೆಯಬಹುದು. ಎರಡು ಸ್ವ-ಸಹಾಯ ಸಂಘದ ಹೆಸರಿನ ಮೂಲಕ ಸಾಲವನ್ನು ಪಡೆಯಬಹುದು.

  • ಬ್ಯಾಂಕ್ ಮೂಲಕ ಸಾಲ: ಸ್ವ-ಸಹಾಯ ಸಂಘಕ್ಕೆ ಸೇರುವ ಮಹಿಳೆಯರು ತಮ್ಮ ವ್ಯಾಪಾರ ಅಥವಾ ಉದ್ಯಮ ಮಾಡಲು ಬ್ಯಾಂಕ್ ಮೂಲಕ 20 ಲಕ್ಷಕ್ಕೂ ಹೆಚ್ಚು ಸಾಲವನ್ನು ಪಡೆಯಲು ಈ ಯೋಜನೆ ಸಹಾಯ ಮಾಡುತ್ತದೆ.
  • ಈ ಒಂದು ಸಾಲದ ಬಡ್ಡಿ ಪಾವತಿಸಲು ಈ ಒಂದು ಯೋಜನೆ ಅಡಿಯಲ್ಲಿ 3 ಲಕ್ಷ ಹಣವನ್ನು ಸಹಾಯಧನ ಸಿಗುತ್ತದೆ.
  • ಸ್ವ-ಸಹಾಯ ಸಂಘದ ಮೂಲಕ ಸಾಲ: ಮಹಿಳೆಯರು ಸ್ವಂತ ಉದ್ಯಮ ಅಥವಾ ವ್ಯಾಪಾರವನ್ನು ಆರಂಭಿಸಲು ಸಂಘದ ಮೂಲಕ 5 ಲಕ್ಷದವರೆಗೆ ಸಾಲವನ್ನು ಪಡೆಯಬಹುದು.
  • ಈ ಒಂದು ಸಾಲದ ಬಡ್ಡಿ ಪಾವತಿಸಲು ಈ ಒಂದು ಯೋಜನೆ ಅಡಿಯಲ್ಲಿ 1.5 ಲಕ್ಷದವರೆಗೆ ಸಹಾಯಧನ ಸಿಗುತ್ತದೆ ಒಟ್ಟಾರೆಯಾಗಿ ಮಹಿಳೆಯರು ವ್ಯಾಪಾರ ಅಥವಾ ಉದ್ಯಮ ಮಾಡಲು ಈ ಒಂದು ಯೋಜನೆ ಕಡಿಮೆ ಬಡ್ಡಿದರ ಸಾಲವು ಸಾಕಷ್ಟು ಉಪಯೋಗವಾಗಿದೆ.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:

  1. ಆಧಾರ್ ಕಾರ್ಡ್
  2. ಪ್ಯಾನ್ ಕಾರ್ಡ್
  3. ಬ್ಯಾಂಕ್ ಪಾಸ್ ಬುಕ್
  4. ವ್ಯಾಪಾರ ಅಥವಾ ಉದ್ಯಮ ದೃಢೀಕರಣ ಪತ್ರ
  5. ಫೋಟೋ

ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

ಮೇಲೆ ನೀಡಿರುವ ದಾಖಲೆಗಳೊಂದಿಗೆ ನಿಮ್ಮ ತಾಲೂಕು ಪಂಚಾಯಿತಿಗೆ ಭೇಟಿ ನೀಡುವ ಮೂಲಕ ಅಲ್ಲಿನ NRLM ಯೋಜನೆ ಅಧಿಕಾರಿಗಳ ಮೂಲಕ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಿ, ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ಪಡೆಯಿರಿ.

Leave a Comment